Uncategorized
ಗೋನವಾರ ಕಿಶನ್ ರಾವ್
- ಇನಿಯ ದನಿಯಲೊಂದು
- ಹಾಡಲೇಬೇಕಿದೆ ಈಗ
- ಹೇಗೆ ? ಏಕೆ ?
- ಸೂರುರಹಿತ ದನಿಯಿಂದ
- ಕಲರವ ಕೇಳುವುದು ಕಾಣೆ!
- ಬೆರಳುಗಳೇ ಆಡದ ಕೊಳಲಿನ
- ರಂಧ್ರದಲಿ ವೇಣುಗಾನ ಒಸರೀತೆ!!
- ಬಾರದೆಂದು ಬಿಡಲಾರೆ ನಾ
- ಇನಿದನಿಯ ಒಂದು ಹೊಮ್ಮಿಸಿ
- ಬಿಡುವೆ
- ಸಾಧಕನಂತೆ ರಿಯಾಜ್ ಬೇಕದಕೆ
- ನಾನು ? ಸಾಧಕ ?
- ಎತ್ತಣ ಕೊಳಲನಾದ ಎತ್ತಣ ಕೋಗಿಲೆ
- ಇದು ಬೆರಳುಗಳಾಟ
- ಹಾಡಲಾರೆ ಗೆಳತಿ
- ನೀನಿಲ್ಲದ ಈ ಸೂರು
- ಬೇಸೂರು
- ನೀ ಅಡಗಿರುವೆಯಾದರೂ
- ಎಲ್ಲಿ ?
- ಸಂಕಟ ನೀನಿಲ್ಲದ
- ಸಂಭ್ರಮ ಬೆರಳುಗಳ
- ಸರಿದಾಟದ !!