ಲೇಖಕರ ಗಮನಕ್ಕೆ:

ಹೈದರಾಬಾದಿನ ಕನ್ನಡ ಸಂಸ್ಥೆ, ಕರ್ನಾಟಕ ಸಾಹಿತ್ಯ ಮಂದಿರದ ನಿಯಮಾವಳಿಗೆ,ಪರಿಚಯ ಬದ್ಧವಾಗಿದ್ದರೂ,ಅದು ಅನೇಕ ಲೇಖಕರ , ಬರಹಗಳ ವೇದಿಕೆಯೇ ಹೌದು.

ಮತ್ತದು ತನ್ನದೇ ಆದ ವೈಚಾರಿಕ ಅಭಿವ್ಯಕ್ತಿ ಹಾಗೂ ನಿಲುವುಗಳನ್ನು ಹೊಂದಿರುವುದಿಲ್ಲ.

ಆದುನಿಕ ಕನ್ನಡ ಭಾಷೆಯ ಬೆಳವಣಿಗೆಯನ್ನು ಲಕ್ಷದಲ್ಲಿಟ್ಟುಕೊಂಡು,ಬರುವ ಪ್ರಯೋಗಗಳು, ಚಿಂತನೆಗೆ ಗ್ರಾಸ ನೀಡುವ ಬರಹಗಳು, ಕಥೆ ಹೇಳುವ ಶೈಲಿ,ಕವಿತೆಗಳಲ್ಲಿ ಹೊಸದಾಗಿ ಕವಿತಾ ಲೋಕಕ್ಕ ಹೊಸ ಹೊಸ ಪ್ರಯೋಗಗಳ,ಭಾಷೆ ಶೈಲಿಯಲ್ಲಿರಲಿ.

ನಿಮ್ಮ ಅಂದದ ಬರಹಗಳು ಪರಿಚಯದ ಬೆಳವಣಿಗೆಯ ನಮ್ಮ ಹಾದಿಯಲ್ಲಿ ಬೆನ್ನೆಲುಬಾಗಲಿ.

ಎಲ್ಲರನ್ನೂ ಗೌರವಿಸುವ, ನಮ್ಮ ಈ ಪ್ರಯತ್ನ ನೀವಲ್ಲದೆ ಬೇರಾರು ಸಾಧ್ಯವಾಗಿಸಲಾರರು.

ನಿಮ್ಮ ಬರಹದ ಪ್ರತಿ ಅಕ್ಷರ ಕನ್ನಡ ಸಾರಸ್ವತ ಲೋಕಕ್ಕೆ ಒಂದು ಅರ್ಪಣೆ, ಒಂದು ಹೊಸ ಘಟ್ಟ ನಿರ್ಮಾಣದತ್ತ ಒಂದು ಇಟ್ಟಿಗೆಯಾಗಲಿ.

ಬರಹ,ಲಿಪಿ,ಮೊದಲಾದ ಯಾವುದೇ ತಂತ್ತಾಂಶ ಬಳಸಿ ಟಂಕಿಸಿ ಕಳಿಸಿ.ನೆನಪಿರಲಿ pdf ಹಸ್ತಪ್ರತಿಗಳು ದಯವಿಟ್ಟು ಬೇಡ.

ನಮ್ಮ ಮೇಲ id ಅಥವಾ ವಾಟ್ಸಪ್ ಮೂಲಕವೂ ಸಹ ನಿಮ್ಮ ಬರಹಗಳನ್ನು ( ಕತೆ,ಕವಿತೆ,ಚಿಂತನೆ,ವ್ಯಕ್ತಿ-ಚಿತ್ರ, ಪುಸ್ತಕ ಪರಿಚಯ, ಸಂದರ್ಶನ, ಭಾಷಾವಿಚಾರ, ಮೊದಲಾದುವುಗಳನ್ನು ) ಕಳಿಸಬಹುದು.ಆಯ್ಕೆಯಾದ ಬರಹಗಳನ್ನು ಸಮಾನುಸಾರ ಪ್ರಕಟಿಸಲಾಗುವುದು.

ಬರಹಗಳಲ್ಲಿಯ, ವಿಚಾರಗಳು ವಿಮರ್ಶೆ, ಟೀಕೆ,ಟಿಪ್ಪಣಿ ಮೊದಲಾದುಗಳು ಲೇಖಕನ ವೈಯಕ್ತಿಕ ವಿಚಾರಗಳೇ ಹೊರತು , ಅವುಗಳಿಗೆ ಪರಿಚಯದ ಸಂಪಾದಕ ಮಂಡಳಿ,ಸಲಹಾ ಸಮಿತಿ,ಅಥವಾ ಕರ್ನಾಟಕ ಸಾಹಿತ್ಯ ಮಂದಿರ ಯಾವುದೇ ರೀತಿ ಜವಾಬುದಾರರಲ್ಲ.

ಕಳಿಸಿದ ಬರಹಗಳು, ಪ್ರಕಟಿಸಲು ೧೫ ದಿನಗಳಿಗಿಂತ ಹೆಚ್ಚು ಸಮಯವಾದರೆ ಚಿಂತೆ ಬೇಡ. ನಮ್ಮ ಸೂಚನೆಗೆ ಕಾಯಿರಿ.

‘ಪರಿಚಯ’ ದ ಈ ಹೊಸ ಅಂತರಜಾಲ ರೂಪ ಹೈದರಾಬಾದಿನ ಕನ್ನಡದ ದನಿಯಾಗಲಿ.

ಪರಿಚಯ.ಆನ್ ಲೈನ ಪರಿವಾರ .